News & Events

ಅಂತರಾಷ್ಟ್ರೀಯ ಯೋಗ ದಿನ International Yoga Day

ಅಂತರಾಷ್ಟ್ರೀಯ ಯೋಗ ದಿನ International Yoga Day

June 21, 2019

ದಿನಾಂಕ:21-06-2017ರಂದು ನಮ್ಮ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗ ತರಬೇತಿದಾರರಾದ ಶ್ರೀ ಗೋವಿಂದ ದೇವಾಡಿಗ, ಜಾಲಿ, ಭಟ್ಕಳ ಇವರು ಯೋಗ ತರಗತಿಗೆ ನೇತೃತ್ವ ನೀಡಿದ್ದರು. ನಮ್ಮ ಮಹಾವಿದ್ಯಾಲಯದ ಎನ್.ಎಸ್.ಎಸ್. ಅಧಿಕಾರಿ ಪ್ರೊ. ಮಂಜುನಾಥ ಪ್ರಭು ಸ್ವಾಗತಿಸಿದರು. ಪ್ರಾಂಶುಪಾಲರಾದ ಪ್ರೊ. ಎಂ.ಕೆ. ಶೇಖ್, ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಪ್ರೊ. ಬಿ.ಎಚ್. ನದಾಪ್, ಬೋಧಕ, ಬೋಧಕೇತರ ಸಿಬ್ಬಂಧಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ತರಬೇತಿದಾರರು ಯೋಗದಿಂದ ಆಗುವ ಪ್ರಯೋಜನವನ್ನು ತಿಳಿಸುಕೊಡುವುದರ ಜೊತೆಯಲ್ಲಿ ಪ್ರಾಯೋಗಿಕವಾಗಿಯೂ ಕೂಡ ಯೋಗವನ್ನು ಮಾಡಿಸಿದರು.

Read more about ಅಂತರಾಷ್ಟ್ರೀಯ ಯೋಗ ದಿನ International Yoga Day
2019ರ ಲೋಕಸಭಾ ಚುನಾವಣೆಗಾಗಿ ಬೃಹತ್ ಜಾತಾ ಕಾರ್ಯಕ್ರಮ

2019ರ ಲೋಕಸಭಾ ಚುನಾವಣೆಗಾಗಿ ಬೃಹತ್ ಜಾತಾ ಕಾರ್ಯಕ್ರಮ

March 14, 2019

2019ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಬಗ್ಗೆ ತಾಲೂಕಾ ಮಟ್ಟದಲ್ಲಿ ದಿನಾಂಕ :13-03-2019 ರಂದು ಪೂರ್ವಾಹ್ನ 09:00 ಘಂಟೆಗೆ ಬೃಹತ್ ಜಾತಾ ಕಾರ್ಯಕ್ರಮದಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗಿಯಾಗಿದ್ದರು.

Read more about 2019ರ ಲೋಕಸಭಾ ಚುನಾವಣೆಗಾಗಿ ಬೃಹತ್ ಜಾತಾ ಕಾರ್ಯಕ್ರಮ
“ಮತದಾರರ ಜಾಗೃತಿ ಕಾರ್ಯಕ್ರಮ” (SVEEP)

“ಮತದಾರರ ಜಾಗೃತಿ ಕಾರ್ಯಕ್ರಮ” (SVEEP)

March 9, 2019

ಲೋಕಸಭಾ ಚುನಾವಣೆ 2019ರ ಅಂಗವಾಗಿ ನಮ್ಮ ಮಹಾವಿದ್ಯಾಲಯದಲ್ಲಿ “ಮತದಾರರ ಜಾಗೃತಿ ಕಾರ್ಯಕ್ರಮ” (SVEEP) “ಮತದಾರರ ಖಾತ್ರಿ ಯಂತ್ರ ಪ್ರಾತ್ಯಕ್ಷಿಕೆ” ಕಾರ್ಯಕ್ರಮದ ಮೂಲಕ ಪ್ರಥಮಬಾರಿಗೆ ಮತವನ್ನು ಚಲಾಯಿಸುವಂತಹ ವಿದ್ಯಾರ್ಥಿಗಳಿಗೆ ಮತವನ್ನು ಚಲಾಯಿಸುವ ಬಗ್ಗೆ ಪ್ರಾಯೋಗಿಕವಾಗಿ ಮಾತಿಯನ್ನು ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಪ್ರಭಾಕರ ಚಿಕ್ಕನಮನೆ, ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ವಿಭಾಗ, ತಾಲೂಕ ಪಂಚಾಯತ ಭಟ್ಕಳ., ಶ್ರೀ ಸಮ್ಸುದ್ದೀನ್, ಅಧಿಕಾರಿಗಳು ಅಲ್ಪಸಂಖ್ಯಾತ ಕಛೇರಿ ಭಟ್ಕಳ ಮತ್ತು ಶ್ರೀ ಸಂತೋಷ ಶ್ರೇಷ್ಠೆ, ಬಿ.ಆರ್.ಪಿ. ಭಟ್ಕಳ ಇವರುಗಳು ಉಪಸ್ಥಿತರಿದ್ದರು.

Read more about “ಮತದಾರರ ಜಾಗೃತಿ ಕಾರ್ಯಕ್ರಮ” (SVEEP)
ಮೊಹಮ್ಮದ್ ಅಸ್ಜುದ್ ಗೆ ಯುನಿವರ್ಸಿಟಿ ಬ್ಲೂ ಕರೀಟ

ಮೊಹಮ್ಮದ್ ಅಸ್ಜುದ್ ಗೆ ಯುನಿವರ್ಸಿಟಿ ಬ್ಲೂ ಕರೀಟ

March 9, 2019
ಬಿ.ಕಾಂ. ಆರನೇ ಸಮ್ ನಲ್ಲಿ ಓದುತ್ತಿರುವ ಮೊಹಮ್ಮದ್ ಅಸ್ಜುದ್ ಎನ್ನುವ ವಿದ್ಯಾರ್ಥಿಯೂ ಟೆಯ್ಕೊಂಟೊ (Taekwondo) ಕ್ರೀಡೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆಯಾಗಿದ್ದಾರೆ. 
ವಿಶ್ವಮಹಿಳಾ ದಿನಾಚರಣೆ 2019

ವಿಶ್ವಮಹಿಳಾ ದಿನಾಚರಣೆ 2019

March 8, 2019

ಮಾರ್ಚ 08, 2019 ರಂದು ನಮ್ಮ ಮಹಾವಿದ್ಯಾಲಯದಲ್ಲಿ ವಿಶ್ವ ಮಹುಳಾದಿನಾಚರಣೆಯನ್ನು ಎನ್.ಎಸ್.ಎಸ್. ಘಟಕದಿಂದ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಶ್ರೀಮತಿ ಮೈನಾವತಿ ಭಟ್ಟ ಉಪನ್ಯಾಸಕರು, ಅಂಜುಮನ್ ಮಹಿಳಾ ಮಹಾವಿದ್ಯಾಲಯ,ಭಟ್ಕಳ. ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ.ಮುಸ್ತಾಖ ಕೆ. ಶೇಖ್ ಅವರು ಅಲಂಕರಿಸಿದ್ದರು. ಹಾಗೂ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಪ್ರೊ. ಬಿ.ಎಚ್.ನದಾಫ್, ಮತ್ತು ಪ್ರೊ. ಮಂಜುನಾಥ ಪ್ರಭು, ಎನ್.ಎಸ್.ಎಸ್. ಅಧಿಕಾರಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Read more about ವಿಶ್ವಮಹಿಳಾ ದಿನಾಚರಣೆ 2019
ಎನ್.ಎಸ್.ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರ 2018-19

ಎನ್.ಎಸ್.ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರ 2018-19

March 2, 2019

ರಾಷ್ಟ್ರೀಯ ಸೇವಾ ಯೋಜನ ಘಟಕದ ಸುವರ್ಣಮಹೋತ್ಸವದ ವರ್ಷಾಚರಣೆಯ ವಾರ್ಷಿಕ ವಿಶೇಷ ಶಿಬಿರ 2018-19ರ 7 ದಿನಗಳ ಕಾರ್ಯಕ್ರಮದ ಉದ್ಘಾಟನೆಯನ್ನು ದಿನಾಂಕ 02-03-2019ರಂದು ಹಿ.ಪ್ರಾ.ಶಾಲೆ ಗಾಂಧಿನಗರ ಹೆಬಳೆ, ಭಟ್ಕಳದಲ್ಲಿ ನೆರವೇರಿತು.

 

 

Read more about ಎನ್.ಎಸ್.ಎಸ್. ಘಟಕದ ವಾರ್ಷಿಕ ವಿಶೇಷ ಶಿಬಿರ 2018-19
Kannada Quiz Winner

Kannada Quiz Winner

March 1, 2019

ಮುರುಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ(ರಿ.) ಇವರ ವತಿಯಿಂದ, ಭಟ್ಕಳ ತಾಲೂಕಾ ಮಟ್ಟದ ಕಾಲೇಜು ವಿದ್ಯಾರ್ಥಿಗಳಿಗಾಗಿ, ದಿನಾಂಕ:20-02-2019ರ ಬುಧವಾರದಂದು, ಆರ್.ಎನ್.ಎಸ್. ಪ್ರಥಮ ದರ್ಜೆ ಕಾಲೇಜು ಮುರ್ಡೇಶ್ವರದಲ್ಲಿ ನಡೆದ “ಕನ್ನಡ ಸಾಮಾನ್ಯ ಜ್ಞಾನ ಸ್ಪರ್ಧೆ”ಯಲ್ಲಿ ದ್ವಿತೀಯ ಸ್ಥಾನವನ್ನು ಕು.ಸಂತೋಷ ಖಾರ್ವಿ, ತೃತೀಯ ಸ್ಥಾನವನ್ನು ಕು. ಜಯಶ್ರೀ ಗಣಪತಿ ನಾಯ್ಕ ಹಾಗೂ ಸಮಧಾನಕರ ರೂಪದಲ್ಲಿ ಕು. ಗಣಪತಿ ಆರ್. ನಾಯ್ಕ ರವರು ಪಡೆದಿರುತ್ತಾರೆ.  

Read more about Kannada Quiz Winner